`ರಾಜಾಕಲ್ಲು' ಕಣಿವೆಯ ಸೌಂದರ್ಯಧಾಮ
ವಿ. ಸಂತೋಷಕುಮಾರ್
July 22, 2012 Share [-]Text[+]
Topics
ರಾಜಾಕಲ್ಲು ,
ಜೋಗ ಜಲಪಾತ ,
ಈ ವಿಭಾಗದಿಂದ ಇನ್ನಷ್ಟು
`ಮಾನವನಾಗಿ ಹುಟ್ಟಿದ್ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಜೋಗಾದ್ಗುಂಡಿ` ಎಂಬ ಕವಿವಾಣಿಯನ್ನು ಮೆಲುಕು ಹಾಕುತ್ತಾ ನಿಂತ ನಿಸರ್ಗ ಪ್ರಿಯರಿಗೆ ಕಣಿವೆಯ ಉದ್ದ ತಿಳಿಯುವ ಕುತೂಹಲ ಸಹಜವಾಗಿ ಜೋಗದಲ್ಲಿ ಮೂಡಿ ಬರುತ್ತದೆ.
ಅಂಬುತೀರ್ಥದಲ್ಲಿ ಹುಟ್ಟುವ ಶರಾವತಿ ನದಿ, ಬೆಟ್ಟ, ಗುಡ್ಡಗಳ ಝರಿಗಳಲ್ಲಿ ಒಂದಾಗಿ ಹರಿದು, ಮಾನವ ನಿರ್ಮಿತ ಲಿಂಗನಮಕ್ಕಿ ಅಣೆಕಟ್ಟಿನಲ್ಲಿ ತುಂಬಿ ತುಳುಕಿ ಹೊರ ಬಂದು ಪಶ್ಚಿಮಘಟ್ಟಗಳ ಶಿಖರಗಳ ಮೇಲಿನಿಂದ ನಿತ್ಯಹರಿದ್ವರ್ಣ ವನದ ಕಾಡನ್ನು ಒಳಗೊಂಡಿರುವ ಶರಾವತಿ ಕಣಿವೆಯ ಆಳದಲ್ಲಿ ಹರಿದು ಅರಬ್ಬಿ ಸಮುದ್ರವನ್ನು ಸೇರುವುದನ್ನು ನೋಡುವುದೇ ಒಂದು ಭಾಗ್ಯ.
ಇಂತಹ ಸುಂದರ ನಯನ ಮನೋಹರ ದೃಶ್ಯಗಳನ್ನು ಕಣ್ತುಂಬ ನೋಡಿ ಆನಂದಿಸಲು ಅಂದಿನ ಮೈಸೂರು ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್ ಅವರಿಂದ ನಿರ್ಮಿಸಲ್ಪಟ್ಟ ಸೌಂದರ್ಯ ಧಾಮವೇ ಜೋಗದ ರಾಜಾಕಲ್ಲು.
ಜೋಗಕ್ಕೆ ಬರುವ ಸಾಕಷ್ಟು ಪ್ರವಾಸಿಗರಿಗೆ ಈ ರಾಜಾಕಲ್ಲಿನ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಇಲ್ಲಿನ ಆಡಳಿತ ಮಂಡಳಿಯು ಯಾವುದೇ ಮಾಹಿತಿಗಳನ್ನು ಒದಗಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿಲ್ಲ. ಜೋಗ ಜಲಪಾತದಿಂದ 1 ಕಿ.ಮೀ. ದೂರದಲ್ಲಿ ಇರುವ ಮಹಾತ್ಮ ಗಾಂಧಿ ವಿದ್ಯುದಾಗರದ ಶಿಖರ ಪ್ರದೇಶದಲ್ಲಿ ಬಹುಅಪರೂಪದ ಬೃಹತ್ ಗಾತ್ರದ ಏಕಶಿಲೆ ಅಷ್ಟದಿಕ್ಕುಗಳನ್ನು ತೋರಿಸುತ್ತಾ ಚಳಿ, ಗಾಳಿಗೆ ಜಗ್ಗದೇ ಬಿಸಿಲು ಮಳೆಗೆ ಅಳುಕದೇ ಅಚಲವಾಗಿ ನಿಂತಿರುವುದನ್ನು ಇಲ್ಲಿ ಕಾಣಬಹುದಾಗಿದೆ.
ಇಲ್ಲಿನ ಏಕಶಿಲೆಯ ಮೇಲೆ ರಾಜ್ಯದ ಪ್ರಮುಖ ನಗರಗಳು ಯಾವ ದಿಕ್ಕಿಗೆ ಬರುತ್ತದೆ ಎಂಬ ಬಗ್ಗೆ ಕೆತ್ತನೆ ಮಾಡಿ ತೋರಿಸಲಾಗಿದೆ. ನುಣುಪಾಗಿ ಜಾರುವ ವಿಶೇಷವಾದ ಈ ಕಲ್ಲು ಬಹುರೂಪದ ಗ್ರಾನೈಟ್ ಕಲ್ಲಿನ ಮಾದರಿ ಇದೆ. ಕಷ್ಟಪಟ್ಟು ರಾಜಾಕಲ್ಲಿನ ಮೇಲೆ ಹತ್ತಿ ಕುಳಿತರೆ ಕಾಣ ಸಿಗುವ ಆನಂದ ಬಣ್ಣಿಸಲಾಗದು.
ಜೋಗ ಜಲಪಾತದಲ್ಲಿ ಧುಮುಕುವ ಶರಾವತಿ ಹಳ್ಳಕೊಳ್ಳದ ಮಧ್ಯೆ ಬಳುಕುತ್ತಾ ನೊರೆನೊರೆಯಾಗಿ ಹರಿಯುವುದು ಒಂದೆಡೆ ಕಾಣಿಸುತ್ತದೆ. ದಟ್ಟಹಸಿರಿನ ವನರಾಶಿಯ ಮಧ್ಯೆ ಹಾಲ್ನೊರೆಯಂತೆ ಹರಿಯುವ ಶರಾವತಿ ಭಾರೀ ಬಂಡೆಗಳ ಮೇಲೆ ಅಲ್ಲಲ್ಲಿ ಧುಮುಕುತ್ತಾ, ನಲಿಯುತ್ತಾ ನರ್ತನ ಮಾಡಿ ಬರುತ್ತಿದೆಯೇನೋ ಎಂಬ ಭಾವನೆ ಮೂಡುವುದು ಇಲ್ಲಿ ಸಹಜ.
ಈ ಸುಂದರ ನಯನ ಮನೋಹರ ದೃಶ್ಯವನ್ನು ನೋಡುತ್ತಾ ಬರುತ್ತಿದ್ದಂತೆ ಮಹಾತ್ಮ ಗಾಂಧಿ ವಿದ್ಯುದಾಗರದ ನೀರು ಜೊತೆಗೂಡಿ ಹರಿವನ್ನು ಇಮ್ಮಡಿಗೊಳಿಸುವುದನ್ನು ಇಲ್ಲಿ ಕಾಣಬಹುದು. ಮುಂದೆ ಹರಿಯುವ ನದಿ ಕಣಿವೆಯ ಮಧ್ಯಭಾಗದಲ್ಲಿರುವ ಅಂಬುತೀರ್ಥ ಜಲವಿದ್ಯುದಾಗಾರದ ಅಣೆಕಟ್ಟೆಯಲ್ಲಿ ಬಂಧಿಯಾಗುವುದನ್ನು ಕಾಣಬಹುದು.
ಹಾಗೇ ದೃಷ್ಟಿ ಮುಂದಕ್ಕೆ ಹಾಯಿಸಿದರೆ ಅಂಬುತೀರ್ಥ ಅಣೆಕಟ್ಟಿನ ತೂಬಿನ ಮೇಲಿನಿಂದ ಧುಮುಕುವ ಶರಾವತಿ ಆಳ ಕಣಿವೆಯಲ್ಲಿ ಉದ್ದಕ್ಕೆ ಹರಿದು ಗೇರುಸೊಪ್ಪ ಜಲಾಶಯದ ಹಿನ್ನೀರಿಗೆ ಸೇರುವುದನ್ನು ಕಾಣಲು ಅದೊಂದು ಮೈನವಿರೇಳುವ ದೃಶ್ಯ ಎಂದರೆ ಅತಿಶಯೋಕ್ತಿ ಎನಿಸಲಾರದು.
ಪ್ರಕೃತಿ ಪ್ರೇಮಿ ಬಿ. ಶ್ರೀನಿವಾಸರಾವ್ `ಇದು ಕರ್ನಾಟಕದ ಕಾಶ್ಮೀರ` ಎಂದು ಬಣ್ಣಿಸುತ್ತಾರೆ.
ಇಂಥ ಅಪರೂಪದ ರಮ್ಯ ತಾಣದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಮತ್ತು ಜೋಗ ಅಭಿವೃದ್ಧಿ ಪ್ರಾಧಿಕಾರ ಗಮನಹರಿಸಿ ಅಭಿವೃದ್ಧಿಪಡಿಸಬೇಕಿದೆ ಎಂಬುದು ಈ ಭಾಗದ ಜನರ ಆಶಯ.

No comments:
Post a Comment