ಜಲಪಾತ ವೀಕ್ಷಣೆಗೆ ಹರಿದು ಬಂದ ಜನಸಾಗರ
ಕಾರ್ಗಲ್: ಸಮೀಪದ ವಿಶ್ವವಿಖ್ಯಾತ ಜೋಗ ಜಲಪಾತದ ಸುತ್ತಮುತ್ತ ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಹಚ್ಚ ಹಸಿರಿನ ವನರಾಶಿಗಳ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದ್ದ ಜಲಧಾರೆಯ ವೀಕ್ಷಣೆಗೆ ಪ್ರವಾಸಿಗರ ದಂಡು ಭಾನುವಾರ ಸಾವಿರಾರು ಸಂಖ್ಯೆಯಲ್ಲಿ ಹರಿದು ಬಂದಿತ್ತು.
ಜಲಪಾತದ ವಾಹನ ಪಾರ್ಕಿಂಗ್ ತಾಣ ಸೇರಿದಂತೆ, ಮುಂಬಯಿ ಬಂಗಲೆ ಪ್ರದೇಶ, ಮೈಸೂರು ಬಂಗಲೆ ಪ್ರದೇಶ, ಶಿರೂರು ಕೆರೆ ದಂಡೆ, ರಾಣಿ ಜಲಪಾತದ ಪಾರ್ಕಿಂಗ್ ತಾಣದೆಲ್ಲೆಡೆ ಹೊರ ಊರುಗಳಿಂದ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆ ಮಾಡಿದ್ದ ಪರಿಣಾಮ ವಾಹನ ಸಂಚಾರಕ್ಕೆ ತಡೆ ಯುಂಟಾಗಿತ್ತು. ಜೋಗದ ಪೋಲೀಸರು ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಹರಸಾಹಸ ಪಟ್ಟರು.
ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ಮದ್ಯಪಾನಿಗಳು ಹಲ್ಲೆ ನಡೆಸಿದ ಘಟನೆಯೂ ನಡೆದಿದೆ. ಕೂಡಲೇ ಎಚ್ಚೆತ್ತ ಪೊಲೀಸ್ ಇಲಾಖೆ ನಾಲ್ವರನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡರು
No comments:
Post a Comment