Friday, 15 August 2014


ಲಿಂಗಂ’ ಸಿನಿಮಾಕ್ಕೆ ಲಿಂಗನಮಕ್ಕಿಯಲ್ಲಿ ಶಿವಾಲಯ

ಕಾರ್ಗಲ್:  ಚತುರ್ಭಾಷ ತಾರೆ ರಜಿನಿಕಾಂತ್ ಅವರ ‘ಲಿಂಗಂ’ ಚಲನಚಿತ್ರಕ್ಕೆ ಲಿಂಗನಮಕ್ಕಿ ಅಣೆಕಟ್ಟೆಯ ರೇಡಿಯಲ್ ಗೇಟಿನ ಬಲಭಾಗದ ಗುಡ್ಡದ ಮೇಲೆ ಅದ್ದೂರಿ ಶಿವಾಲಯ ಸೆಟ್ಟೇರುತ್ತಿದೆ. ಆ.16ರಿಂದ ಇಲ್ಲಿ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ದೃಢಪಡಿಸಿವೆ.
ಈಗಾಗಲೇ ಜೋಗ ಜಲಪಾತದ ರಾಣಿಫಾಲ್ಸ್ ಮೇಲಿನ ಅರಣ್ಯ ಇಲಾಖಾ ಅತಿಥಿಗೃಹದ ಮುಂಭಾಗದಲ್ಲಿ ಚಿತ್ರೀಕರಣ ಆರಂಭವಾಗಿದೆ. ಬುಧವಾರ ನಟ ರಜನಿಕಾಂತ್ ಅವರ ಆಗಮನದ ದೃಶ್ಯದ ಶೂಟಿಂಗ್‌ ನಡೆದಿದೆ. ರಾಕ್‌ಲೈನ್ ವೆಂಕಟೇಶ್  ನಿರ್ಮಾಣದ ಈ ಚಿತ್ರದ ನಾಯಕಿಯಾಗಿ ಸೋನಾಕ್ಷಿ ಸಿನ್ಹಾ ಅಭಿನಯಿಸುತ್ತಿದ್ದಾರೆ.
ಅಪಾರ ಅಭಿಮಾನಿಗಳು ತಮ್ಮ ನೆಚ್ಚಿನ ನಟ ರಜನಿಕಾಂತ್ ಅವರನ್ನು ಕಾಣುವ ಆಸೆಯಿಂದ ಅರಣ್ಯ ಇಲಾಖೆಯ ಗೇಟಿನ ಬಳಿ ಕಾದು ನಿಂತಿದ್ದರೂ, ಅಲ್ಲಿರುವ ಭದ್ರತಾ ಸಿಬ್ಬಂದಿ ಮತ್ತು ಚಿತ್ರೀಕರಣ ತಂಡದವರು ಅವರನ್ನು ತಡೆದು ಕೇವಲ ವಿಐಪಿಗಳನ್ನು ಮಾತ್ರ ಒಳಗೆ ಬಿಡುತ್ತಿರುವುದರಿಂದ ಅಭಿಮಾನಿಗಳಲ್ಲಿ ತೀರಾ ನಿರಾಸೆ ಉಂಟಾಗಿದೆ. ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದೆ.
30ರಿಂದ 40ದಿನಗಳ ಕಾಲ ಶರಾವತಿ ಕಣಿವೆ ಪ್ರದೇಶದಲ್ಲಿ ‘ಲಿಂಗಂ’ ಚಿತ್ರೀಕರಣ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ

No comments:

Post a Comment